ವಿಜಯ್ ಹಜಾರೆ ಟ್ರೋಫಿ (ರಣಜಿ ಒನ್ ಡೇ ಟ್ರೋಫಿ ) 2002-03ರಲ್ಲಿ ರಣಜಿ ಟ್ರೋಫಿ ರಾಜ್ಯ ತಂಡಗಳು ಒಳಗೊಂಡ ಸೀಮಿತ ಓವರುಗಳ ಕ್ರಿಕೆಟ್ ಸ್ಪರ್ಧೆಯಾಗಿ ಪ್ರಾರಂಭಿಸಲಾಯಿತು.ಪ್ರಸಿದ್ಧ ಭಾರತೀಯ ಕ್ರಿಕೆಟಿಗ ವಿಜಯ್‌ ಹಜಾರೆ ಅವರ ಹೆಸರನ್ನು ಇಡಲಾಗಿದೆ.ತಮಿಳುನಾಡು 5 ಬಾರಿ ಟ್ರೋಫಿಯನ್ನು ಗೆದ್ದಿದೆ.2017-18ರಲ್ಲಿ ಕರ್ನಾಟಕವು ಪ್ರಸಕ್ತ ಟ್ರೋಫಿಯ ಚಾಂಪಿಯನ್ ಆಗಿದ್ದು, ಫೈನಲ್ನಲ್ಲಿ ಸೌರಾಷ್ಟ್ರವನ್ನು ಸೋಲಿಸುವ ಮೂಲಕ 3 ನೇ ಪ್ರಶಸ್ತಿಯನ್ನು ಗೆದ್ದಿದೆ . == ಸ್ವರೂಪ == 27 ರಣಜಿ ತಂಡಗಳನ್ನು 5 ಝೋನಲ್ ಗುಂಪುಗಳಾಗಿ ವಿಭಜಿಸಲಾಗಿದೆ: ಒಮ್ಮೆ ಗುಂಪಿನಲ್ಲಿ ಪ್ರತಿ ತಂಡ ಆಡಿದ ನಂತರ, ಐದು ವಿಜೇತರು ಮತ್ತು ಅತ್ಯುತ್ತಮ ಪ್ರದರ್ಶನ ತೋರಿದ ರನ್ನರ್-ಅಪ್ ಕ್ವಾರ್ಟರ್ ಫೈನಲ್ ಹಂತಕ್ಕೆ ನೇರವಾಗಿ ಅರ್ಹತೆ ಪಡೆದರೆ, ನಾಲ್ಕು ಇತರ ರನ್ನರ್-ಅಪ್ಗಳು ಪ್ರಾಥಮಿಕ ಕ್ವಾರ್ಟರ್ ಫೈನಲ್ನಲ್ಲಿ ಆಡುತ್ತವೆ. ಪ್ರಿ-ಕ್ವಾರ್ಟರ್ ಫೈನಲ್ಸ್ನ 2 ವಿಜೇತರು ಉಳಿದ 6 ತಂಡಗಳನ್ನು ಕ್ವಾರ್ಟರ್ ಫೈನಲ್ ಹಂತದಲ್ಲಿ ಸೇರುತ್ತವೆ. 2015-16ರ ಅವಧಿಯಿಂದ, ಝೋನಲ್ ಗುಂಪುಗಳನ್ನು 7 ತಂಡಗಳ 4 ಗುಂಪುಗಳಾಗಿ ಬದಲಾಯಿಸಲಾಯಿತು. ಹಿಂದಿನ 3 ಋತುಗಳಲ್ಲಿನ ಸರಾಸರಿ ಅಂಕಗಳ ಆಧಾರದ ಮೇಲೆ ತಂಡಗಳನ್ನು ವರ್ಗೀಕರಿಸಲಾಗುತ್ತದೆ. == ಉಲ್ಲೇಖ ==